ಶುಕ್ರವಾರ, ಜನವರಿ 11, 2019

ಕುರಾನಿನ ಅವತರಣ ೩

part ..3
ಕುರಾನನ್ನು ಬರೆದವರಾರು ?

ಪ್ರವಾದಿ ಮೊಹಮ್ಮದ್ [ ಸ ಆ ] ರವರ ಮೇಲೆ  ಮಾನವ ಕುಲದ ಮಾರ್ಗದರ್ಶನಕ್ಕಾಗಿ ಅವತೀರ್ಣ ಗೊಂಡ ಈ ಅಲ್ಲಾಹನವಾಣಿ ಅಲ್ಲಾಹನ ಅಂತಿಮ ಸಂದೇಶವಾದ ಪವಿತ್ರ ಕುರಾನ್  ಅವರ ಮರಣದ ನಂತರ ಕೂಡಾ ಬಾಯಿಪಾಠದ ರೀತಿಯಲ್ಲೇ ಹರಡುತ್ತಿತ್ತು

ಇಸ್ಲಾಮ್ ಅರಬ್ ದೇಶಗಳನ್ನು ಬಿಟ್ಟು ಹೊರಭಾಗ ಗಳಿಗೆ ವಿಸ್ತಾರ ವಾಗುತ್ತಿರುವಾಗ ಕುರಾನಿನ ಒಂದು ಪ್ರತಿಯನ್ನು ಕ್ರೋಢೀಕರಿಸಿಡುವ ಪ್ರಸ್ತಾವ ಉಮರ್ [ ರ ಆ ] ನೀಡಿದಾಗ ಅಂದಿನ ಮೊದಲಿನ ಖಲೀಫಾ ಅಬೂಬಕರ್ ಸಿದ್ದಿಕ್ [ ರ ಆ ] ರವರು ಅದರ ಜವಾಬ್ದಾರಿಯನ್ನು ಬರಹದಲ್ಲಿಯೂ ನೆನಪಿನ ಶಕ್ತಿಯಲ್ಲೂ ಅತ್ಯುತ್ತಮರಾಗಿದ್ದ ಸಹಾಬಿ ಜೈದ್ ಬಿನ್ ಸಾಬಿತ್ [ ರ ಆ ] ಮೇಲ್ವಿಚಾರಣೆಯಲ್ಲಿ ಕುರಾನ್ ಬಾಯಿಪಾಠ ವಿದ್ದವರ ಒಂದು ಸಮಿತಿ ರಚಿಸಿ ಆಜ್ಞಾಪಿಸುತ್ತಾರೆ .

ಅದರಂತೆ ಮೊತ್ತ ಮೊದಲು ಕುರಾನನ್ನು ಬರಹ ರೂಪದಲ್ಲಿ ಒಂದೇ ಕಡೆ ಕ್ರೋಢೀ ಕರಿಸಲಾಗುತ್ತದೆ .

ನಂತರ ಮೂರನೇ ಖಲೀಫಾ ಉಸ್ಮಾನ್ ರವರ ಕಾಲದಲ್ಲಿ ಇಸ್ಲಾಮ್ ಬಹಳ ವಿಸ್ತರಿಸ ತೊಡಗಿದಾಗ  ಅದರ ನಾಲ್ಕು ಪ್ರತಿಗಳನ್ನು ರಚಿಸಿ ನಾಲ್ಕು ಪ್ರಧಾನ ಗವರ್ನರ್ ಗಳ ವಶ ಕಳಿಸಿ ಕೊಡಲಾಗುತ್ತದೆ .

ಅದರ ನಂತರ ಇಸ್ಲಾಮ್ ಹರಡಿದಂತೆ ಬಾಯಿಪಾಠ ಮಾಡುವ ಕೇಂದ್ರಗಳು ಲೋಕದಾದ್ಯಂತ ನಿರ್ಮಿಸಲಾಗುತ್ತದೆ .
ಈ ಕುರಾನ್ ಬಾಯಿಪಾಠ ಮಾಡುವ ಉತ್ಸಾಹ ಮುಸ್ಲಿಮರ ಮನೆ ಮನೆ ಯಲ್ಲಿ ಈಗಲೂ ಮುಂದುವರಿಯುತ್ತಾ ಬಂದಿದೆ . [ಕಾಂಗ್ರೆಸಿನ ನೇತಾರ ಯು ಟಿ ಖಾದರ್ ರವರ ಮನೆಯಲ್ಲೂ ಒಂದು ಕುರಾನ್ ಬಾಯಿಪಾಠ ಮಾಡಿರುವ ಅವರ ಮಗಳಿದ್ದಾಳೆ ಎಂದು ಈಗಾಗಲೇ ಎಲ್ಲರಿಗೂ ತಿಳಿದ ವಿಷಯ ವಾಗಿರುತ್ತದೆ .]

ಇಡೀ ಲೋಕದಲ್ಲಿಂದು   ಕುರಾನ್ ಬಾಯಿಪಾಠಮಾಡಿದವರು ಎಲ್ಲಾ ಕುಟುಂಬಗಳಲ್ಲಿ ಒಬ್ಬರಿಬ್ಬರು ಇದ್ದಾರೆ .
ನನ್ನ ಕುಟುಂಬದಲ್ಲೂ ಮೂವರು ಇದ್ದಾರೆ ಅಲ್ಹಮ್ದುಲಿಲ್ಲಾಹ್ .
ನಾವು ಪುಸ್ತಕ ನೋಡಿ ಓದುವಾಗ ಮಾಡುತ್ತಿರುವ ಸಣ್ಣ ಸಣ್ಣ ತಪ್ಪುಗಳನ್ನು ಆವರು ನೋಡದೆ ತಿದ್ದುತ್ತಾರೆ .

ಅದಲ್ಲದೆ ಅಂದು ಮೊದಲ್ಗೊಂಡ ಬರಹ ರೂಪದಲ್ಲಿ ಮುಂದುವರಿದ ಕುರಾನ್ ಅದೆಷ್ಟೋ ಮುಸ್ಲಿಂ ದೇಶಗಳಲ್ಲೂ ಮುಂದುವರಿಯುತ್ತಲೇ ಇದೆ . ಸೌದಿ ಅರೇಬಿಯಾದಲ್ಲಂತೂ ಬರಿಯ ಕುರಾನ್ ಮುದ್ರಣಕ್ಕಾಗಿಯೇ ಒಂದು ಪ್ರೆಸ್ಸನ್ನೇ  ನಿರ್ಮಿಸಲಾಗಿದೆ .

ಪ್ರವಾದಿಯವರಿಗೆ ಅವತೀರ್ಣ ಗೊಂಡ ಕುರಾನನ್ನು ಬರೆದವರು ಯಾರು ಎಂಬ ಪ್ರೆಶ್ನೆಗೆ ಇದಾಗಿದೆ ಉತ್ತರ

ಪ್ರವಾದಿಕಾಲದಲ್ಲಿ ಬಾಯಿಪಾಠ ಮಾಡಿದ್ದವರೇ ಅದನ್ನು ಬರಹ ರೂಪದಲ್ಲಿ ಕ್ರೋಢೀಕರಿಸಿ ಜಗತ್ತಿನ ಮುಂದೆ ಇಟ್ಟಿದ್ದರು .
ಆದರೆ ಈಗಲೂ ಕುರಾನನು ಮುದ್ರಿಸಿದರೆ ಅದು ಸರಿಯಾಗಿ ಮುದ್ರಣ ವಾಗಿದೆಯೋ ಇಲ್ಲವೋ ತಪ್ಪು ಪ್ರಿಂಟಾಗಿದೆಯೋ ಎಂಬುವುದನ್ನು ಪರಿಶೀಲಿಸುವುದು ಈ ಬಾಯಿಪಾಠ ಮಾಡಿದವರೇ .

.ಈ ಕಳೆದ ಶತಮಾನದಲ್ಲಿ ಇನ್ನು ಮುಂದುವರಿದು ಅದರ ಭಾವಾನುವಾದಗಳನ್ನು ಲೋಕದ ಎಲ್ಲಾ ಭಾಷೆಗಳಲ್ಲೂ ಮಾಡಲಾಗಿದೆ . ಕನ್ನಡ ದಲ್ಲಿ ಮೊತ್ತ ಮೊದಲು ಈ ಭಾವಾನುವಾದವನ್ನು ಮಾಡಿದವರು ನನ್ನ ತಂದೆಯವರಾದ
ಅಬುಲ್ ಗಫಾರ್ ಸುಳ್ಯ [ ಆ ರ ] ಹೇಳಲು ನನಗೆ ಬಹಳ ಸಂತೋಷ ವಾಗುತ್ತಿದೆ .

ಆದರೆ ಇಲ್ಲಿ ಕೆಲವು ಫೇಸ್ ಬುಕ್ ಗೆಳೆಯರು ಈ ಕುರಾನಿನ ಮೇಲೆ ಯಾವುದೇ ನಂಬಿಕೆ ಇಲ್ಲದೆ ಕುರಾನ್ ಹರುಡುತ್ತಿರುವ ರೀತಿಯನ್ನು ನೋಡಿ ಹತಾಶರಾಗಿ ಪರಚಿಕೊಳ್ಳುವವರಂತೆ ಕಂಡಾಗ  .. ನಿನ್ನೆ ಬಂದ್ ಸಮಯ ರೈಲು ನಿಲ್ಲಿಸಲು ಅಡ್ಡ ನಿಂತು ಓಡಿ.... ಅದರ ಬರುವ ರಭಸವನ್ನು ನೋಡಿಯೇ ಚದರಿ ಹೋದವರ ನೆನಪಾಗುತ್ತದೆ.ಮತ್ತು ಬಹಳ ಬೇಸರ ವಾಗುತ್ತದೆ .
ವೆರಿ ಸೋರಿ .
ನಾವು ಒಪ್ಪುವುದಿಲ್ಲ ಎಂದು ಹೇಳಿ ಸುಮ್ಮನಿರುವುದು ಬಿಟ್ಟು ಈ ಸರ್ಕಸ್ ಮಾಡುವ ಅಗತ್ಯವಿದೆಯೇ ?

mmgs

ಕುರಾನಿನ ಅವತರಣ ೨

ಪಾರ್ಟ್ 2

ಇನ್ನುಕುರಾನಿನ  ಮಾರ್ಗದರ್ಶನದ ಬಗ್ಗೆ ಕೆಲವು ಮಾತುಗಳು

ಸಾಮಾನ್ಯವಾಗಿ ಮಾರ್ಗದರ್ಶನ ಮೂರು ಬಗೆಗಳನ್ನು ವಿವರಿಸಲಾಗುತ್ತದೆ .

೧. ಅಲ್ಲಾಹನ ಕಡೆಯಿಂದ ಎಲ್ಲಾ ಸ್ರಷ್ಠಿಗಳಿಗೆ ಮಾನವನಿಗೂ ಸೇರಿದಂತೆ  ನೀಡಿದ ಮೂಲ ಮಾರ್ಗದರ್ಶನ
ಪ್ರತಿಯೋರ್ವ ಮಾನವನಲ್ಲಿ ಪ್ರಾಣಿಗಳಲ್ಲಿ ಅದನ್ನು ಕಾಣಬಹುದು

೨. ಅದು ಹಿರಿಯರು ಕಿರಿಯರಿಗೆ ಕೊಡುವಂತಹ ಮಾರ್ಗದರ್ಶನ , ತಮ್ಮ ಅನುಭವನ್ನು ಹಸ್ತಾಂತರಿಸುವುದು  ಎನ್ನಬಹುದು ಅದು ಸರಿಯಾಗಿರಲೂ ಬಹುದು ತಪ್ಪಾಗಿರಲೂ ಬಹುದು

೩. ಮಾನವ ಸ್ರಷ್ಟಿಗೆ ಸ್ರಷ್ಟಿಕರ್ತನ ಕಡೆಯಿಂದ ಅವನ ಸ್ರಷ್ಟಿಯ ಉದ್ದೇಶ ಜೀವನದಲ್ಲಿ  ಶಾಂತಿ ನೆಮ್ಮದಿಯ ಬಾಳಿಗಾಗಿ ಪ್ರತಿ ಕಾಲದಲ್ಲಿ ಓರ್ವ ಪ್ರವಾದಿಯನ್ನು  ನಿಯಮಿಸಿ ಅವನ ಮೂಲಕ ಸಮಾಜ ತಿದ್ದಿ ಒಂದು ಉತ್ತಮ ವ್ಯಕ್ತಿ ಒಂದು ಉತ್ತಮ  ಸಮಾಜ ನಿರ್ಮಾಣಕ್ಕೆ ನೀಡುವ ಮಾರ್ಗದರ್ಶನ .

ಇಲ್ಲಿ ಕುರಾನ್ ಮಾತಾಡುತ್ತಿರುವುದು ಅಧ್ಯಾಯ 2  ಸೂಕ್ತ 2 ರಲ್ಲಿ  ಈ ಮೂರನೇ ಮಾರ್ಗದರ್ಶನದ ಬಗ್ಗೆ .

ಆದರೆ ಈ ಮಾರ್ಗದರ್ಶನ ಪಡೆಯಲು ಅದರಂತೆ ನಡೆದು ಜೀವನ ನಡೆಸಲು ಬೇಕಾದ ಅರ್ಹತೆಗಳನ್ನು ಕೂಡ ಅದ್ಯಾಯ 2  ಸೂಕ್ತ 3  4  5  ರಲ್ಲಿಯೇ  ಪಟ್ಟಿ ಮಾಡಲಾಗಿದೆ .

೧. ''ತಕ್ವಾ'' ಎಂಬ ಒಂದು ಹೃದಯದಲ್ಲಿ ಬೆಳೆಯಬೇಕಾದ '' ಗಾಡ್ ಕೊನ್ಷಿಯಸ್ನೆಸ್ '' ದೇವ ಭಯ , ದೇವ ನಿಷ್ಠೆ
ಇತ್ಯಾದಿ ಹೆಸರಲ್ಲಿ ಹೇಳಬಹುದು ... ಆದರೆ ಅದನ್ನು ವಿವರಿಸಲು ಅದೆಷ್ಟೋ ವಿವರಣೆ ಅಗತ್ಯವಿದೆ ಆದರೆ
ಸಂಕ್ಷಿಪ್ತವಾಗಿ ಇಷ್ಟು ಸಾಕು

೨. ತಕ್ವಾ ಬೆಳೆಯಲು ಅಗತ್ಯ ವಾದ ಗುಣಗಳನ್ನು ಕೂಡ ವಿವರಿಸಲಾಗಿದೆ .
ಅದಾಗಿದೆ

a..  ಅಗೋಚರ ವಿಷಯ ಗಳ ಮೇಲೆ ನಂಬಿಕೆ
ಈ ಅಗೋಚರ ವಿಷಯಗಳು ಯಾವು ಅದಕ್ಕೆ ಕುರಾನ್ ಅಧ್ಯಾಯ 4 ಸೂಕ್ತ 136 ರಲ್ಲಿಯೂ ಬೇರೆ ಕಡೆಗಲ್ಲಿಯೂ ವಿವರಿಸಿದೆ . ಇದನ್ನು ವಿವರಿಸುವ ಅದೆಷ್ಟೋ ಪ್ರವಾದಿ ವಚನಗಳು ಕೂಡ ಲಭ್ಯವಿದೆ .
ಇಲ್ಲಿ ಡಿಟೈಲ್ ಬರೆಯುವುದಿಲ್ಲ
b . ನಮಾಜಿನ ಸಂಸ್ಥಾಪನೆ .. ನಮಾಜ್ ಎಂದರೇನು ಅದರ ಬಗ್ಗೆ ವಿವರಣೆ ಗಾಗಿ ಒಂದು ಪುಸ್ತಕವನ್ನೇ ಓದಬೇಕಾಗುವುದು . ಸಂಕ್ಷಿಪ್ತ ವಾಗಿ ಹೇಳ ಬೇಕಾದರೆ ದಿನದಲ್ಲಿ ಐದು ಹೊತ್ತಿನ ನಮಾಜ್ ಪ್ರವಾದಿ ನೆರವೇರಿಸಿದಂತೆ ಅದರ ಎಲ್ಲಾ ಕಡ್ಡಾಯ  ವಿಧಿಗಳನ್ನು ಪಾಲಿಸುತ್ತ ಸಂಸ್ಥಾಪಿಸುವುದಾಗಿದೆ .
c. ಅಲ್ಲಾಹನು ನೀಡಿದ ಸಂಪತಸೌಕರ್ಯಗಳನ್ನು ಇತರರಿಗೆ ಹಂಚುವುದು ವ್ಯಯಿಸುವುದು ವಿತರಿಸುವುದು
ಇದರಲ್ಲಿ ಎಲ್ಲಾ ಸಂಪತಸೌಕರ್ಯಗಳು ಬರುತ್ತವೆ .
d. ಈ ಕುರಾನಿನ ಮೇಲೂ ಇದಕ್ಕಿಂತ ಮೊದಲು ಕಳುಹಿಸಲಾದ ಎಲ್ಲಾ ಅಲ್ಲಾಹನ ಪ್ರವಾದಿ ಮತ್ತು  ಪ್ರವಾದಿಗಳ ಗ್ರಂಥಗಳ ಮೇಲೆ ಕಡ್ಡಾಯವಾಗಿ ವಿಶ್ವಾಸ ವಿರಿಸುವುದು
ಈ ಬಗ್ಗೆಯೂ ಕುರಾನ್ ಇತರ ಕಡೆಗಳಲ್ಲಿ ನೀಡಿದ ವಿವರಣೆಯಂತೆ ಮತ್ತು ಕುರಾನಿನ ಮೇಲೆ ಯಾವ ರೀತಿಯಲ್ಲಿ ವಿಶ್ವಾಸ ವಿರಿಸಬೇಕು ಎಂಬುವುದನ್ನು ತಿಳಿದು ಅದರಂತೆ ವಿಶ್ವಾಸವಿರಿಸಬೇಕಾಗಿದೆ .
e . ಅದರ ನಂತರ ಮಾನವನ  ಈ ಜೀವನ ಮುಗಿದು ಸತ್ತ ಮೇಲೆ  ಮತ್ತೊಮ್ಮೆ ಎಬ್ಬಿಸಿ ಕುರಾನ್ ಇತರ ಕಡೆಗಳಲ್ಲಿ ವಿವರಿಸಿದ ಆ ಎಲ್ಲ ಮರಣಾನಂತರದ ಒಂದೊಂದು ಹೆಜ್ಜೆಯನ್ನು ಅರಿತು ಅದರ ಮೇಲೆ ದ್ರಢ ವಿಶ್ವಾಸ ವಿರಿಸಿ  ಒಂದಿಷ್ಟು ಸಂದೇಹವಿಲ್ಲದೆ ಯಾಕೀನ್ ಮಾಡುವುದಾಗಿದೆ .

ಇಂತಹ ಗುಣ ಹೊಂದಿದವರಿಗೆ ಮಾತ್ರ ಕುರಾನಿನಿಂದ ನಿಜವಾದ ಉದ್ದೇಶ ಆ  ಮಾರ್ಗದರ್ಶನ  ಪಡೆದು ಇಹ ಪರ ವಿಜಯ ಗಳಿಸಬಹುದಾಗಿದೆ .

ಈ ಕುರಾನನ್ನು ಓದುವವರಿಗೆ ಎರಡನೇ ಅಧ್ಯಾಯದ ಈ ಐದು ಸೂಕ್ತಗಳನ್ನು ಅರ್ಥ ಮಾಡಲು ಅದೆಷ್ಟು ವಿವರಗಳನ್ನು ಅರಿಯಬೇಕಾಗುತ್ತದೆ . ಅದನ್ನು ಅರಿಯಲು ಪ್ರಯತ್ನಿಸದೆ ಮುಂದುವರಿಯುವಂತಿಲ್ಲ .

ಹಾಗಾಗಿ ಅದೆಷ್ಟು ಜನರು ಇಸ್ಲಾಮ್ ಸ್ವೀಕರಿಸಿದ್ದರೋ ಅವರು ಈ ಐದು ಸೂಕ್ತಗಳನ್ನು ಅರ್ಥ ಮಾಡಲು ಕೆಲವು ತಿಂಗಳು ಗಳಂತೂ ತಗಲಿಸಿದ್ದಾರೆ  ಮತ್ತು ಅರ್ಥಮಾಡಿದ ಮೇಲೆ ಅವರಿಗೆಲ್ಲಾ ಈ ಸತ್ಯ ಒಪ್ಪದಿರಲು ಸಾಧ್ಯವೇ ಇಲ್ಲ. .

ಇನ್ನು ನಾನು ಓದಿದೆ ಎಂದು ಹೇಳುವುದು ಅರ್ಥ ಮಾಡದೇ ಓದಿದೆ ಎಂದೇ ಅರ್ಥ .

ಇನ್ನು ಈ ವಿಷಯಗಳನ್ನು ಹದೀಸಿನಲ್ಲಿ ಮತ್ತೂ ಮತ್ತೂ  ಬಿಡಿಸಿ ಬಿಡಿಸಿ ವಿವರಿಸಲಾಗಿದೆ  ..

ಈ ಕುರಾನನ್ನು ಅದೆಷ್ಟೋ ಜನರು ಓದಿ ಲೌಕಿಕ  ಪ್ರಯೋಜನ ಗಳಿಸಿದ್ದಾರೆ , ಅದರಲ್ಲಿ ಅಬ್ರಹಾಂ ಲಿಂಕನ್  ನೆಪೋಲಿಯನ್ , ಬೆರ್ನೆರ್ಡ್ ಷಾ , ಎಲ್ಲಾ ಸೇರಿದ್ದಾರೆ  . ನಮ್ಮಲ್ಲಿ ಗಾಂಧೀಜಿ ಮತ್ತು ವಿನೋದ ಭಾವೆ ಅತಿ ಹೆಚ್ಚು ಓದಿದವರು , ವಿನೋಬಾ ಭಾವೆಯಂತು  ಅದನ್ನು ತರ್ಜುಮೆ ಕೂಡ ಮಾಡಿದ್ದರು .

ಆದರೆ ಆ ಮೇಲಿನ ಕಂಡೀಷನ್ ಪೂರ್ತಿಗೊಳಿಸದ  ಕಾರಣ ನಿಜವಾದ ಮಾರ್ಗದರ್ಶನ ಪಡೆಯಲು ಅನರ್ಹರಾದರು .ಲೌಕಿಕ ಬಿರುದು ಮಾತ್ರ ಅವರಿಗೆ  ಲಭಿಸುವಂತಾಯ್ತು .

ಹಾಗಾಗಿ ಮಾರ್ಗದರ್ಶನ ಪಡೆಯಲು ಬೇಕಾದ ಅರ್ಹತೆಯನ್ನು ಕೂಡ ಪಡೆಯಲು ಇದರ ಅಧ್ಯಯನ ನಡೆಸಬೇಕಾಗುತ್ತದೆ .

ಮಾರ್ಗದರ್ಶನ ಬಯಸದೆ , ಅದನ್ನು ಪಡೆಯದೇ ಅದನ್ನು ವಿರೋಧಿಸುವುದು ಎಷ್ಟು ಸರಿ ಅದು ವಿರೋಧಿಸುವವರಿಗೆ ತಿಳಿದಿರಬೇಕಿತ್ತು .

mmags

ಕುರಾನಿನ ಅವತರಣ- ೧

ಮೊತ್ತ ಮೊದಲು ಕುರಾನಿನ ಬಗ್ಗೆ ಕೆಲವು ಮಾತುಗಳು ..!

ಕುರಾನ್ ಅಂದರೆ ಪಠಿಸುವುವದಾಗಿದೆ
ಅದನ್ನು ಬಾಯಿಪಾಠ ಮಾಡಿ ಪಠಿಸಿರಿ ಬರೆದು ಪಠಿಸಿರಿ ಹೇಗೂ ಪಠಿಸಿರಿ
ಅದು ಮೊತ್ತ ಮೊದಲು ತನ್ನನ್ನು ತಾನೇ  ಮನುಕುಲದ ಮಾರ್ಗದರ್ಶನಕ್ಕೆ ಅವತೀರ್ಣ ಗೊಳಿಸಲಾಗಿದೆ ಎಂದು ಸಾರಿದೆ ಅಧ್ಯಾಯ 2 , ಸೂಕ್ತ 2

ಇಲ್ಲಿ ಅವತೀರ್ಣ ಮತ್ತು ಮಾರ್ಗದರ್ಶನ ಎರಡೂ ತಿಳಿಯಬೇಕಾದ ವಿಷಯ
ಅದಕ್ಕಾಗಿ ಅಂದಿನ ಕಾಲದ ಲೋಕದ ಅವಸ್ಥೆಯ ಮೇಲೆ ತುಸು ಕಣ್ಣಾಡಿಸಬೇಕಾಗಿದೆ .
ಇಡೀ ಲೋಕದಲ್ಲಿ ಜನರು ಆರು  ವಿಭಾಗದಲ್ಲಿ ವಿಂಗಡಿಸಿ ಹೋಗಿದ್ದರು
ಐ ರಿಪೀಟ್
ಇಡೀ ಲೋಕದಲ್ಲಿ ಜನರು ಆರು  ವಿಭಾಗದಲ್ಲಿ ವಿಂಗಡಿಸಿ ಹೋಗಿದ್ದರು .

೧. ಜನರು ತಮ್ಮ ಮನ ಬಂದಂತೆ ಯಾರ ಕೈಯಲ್ಲಿ ದೊಣ್ಣೆಯೊ ಅವರದೇ ಎಮ್ಮೆ ಎಂದು ಅಟ್ಟಹಾಸದಲ್ಲಿ ಎಲ್ಲ ದೌರ್ಜನ್ಯಗಳನ್ನು ಮಾಡುತ್ತ ಮೆರೆಯುತ್ತಿದ್ದರು
೨. ಜನರು ಆ ದೌರ್ಜನ್ಯಕ್ಕೆ ಒಳಗಾಗಿ ಶೋಷಣೆಯ ಹೀನಾಯ ಗುಲಾಮ ಜೀವನ ನಡೆಸುತ್ತಿದ್ದರು
೩. ಜನರು ಈ ದೌರ್ಜನ್ಯವನ್ನು ನೋಡಿ ಬೇಸತ್ತು ಪರ್ವತಗಳ ಮೇಲೆ ಗುಹೆಗಳೊಳಗೆ ನೆಮ್ಮದಿ ಶಾಂತಿ ಅರಸಿ ಹೋಗಿ ತಮಗೆ ಮನ ಬಂದ ರೀತಿಯಲ್ಲಿ ಸರಿಯಾದ ಜ್ಞಾನವಿಲ್ಲದಿದ್ದರೂ   ದೇವಧ್ಯಾನದಲ್ಲಿ ಅಳವಡಿಸಿ ಕೊಂಡಿದ್ದರು
೪. ಈ ಮೂರೂ ವಿಧದ ಜನರನ್ನು ನೋಡಿ ಓ ದೇವನೇ ನೀನು ಇರುವಿ ಎಂದಾದರೆ ನಮಗೆ ನಿನ್ನ ಅರಿವನ್ನು ನೀಡು
ಎಂದು ತಾವಾಗಿಯೇ ಆಕಾಶದೆಡೆ ಮುಖ ಮಾಡಿ ಬೇಡುತ್ತಿದರು .
೫ , ಇಲ್ಲಿ ದೇವರ ಆಪ್ತರು ಗ್ರಂಥದವರೆಂದು  ಕೊಚ್ಚಿ ಕೊಂಡು ನಮ್ಮ ಕೊನೆಯ ಮಾರ್ಗದರ್ಶಕ ಬರುವ ಸ್ಥಳ ವಿದೆಂದು ಸಾರಿ ಜನರ ಮಧ್ಯೆ ಕೊಚ್ಚಿ ಕೊಳ್ಳುತ್ತಾ ಕ್ರೈಸ್ತರು ಯಹೂದಿಗಳೂ , ತಮ್ಮ ತಮ್ಮ ಅಳಿದು ಉಳಿದ ರೀತಿ ನೀತಿಗಳನ್ನು ಅಳವಡಿಸುತ್ತಾ ಪಾದ್ರಿಗಳ ಮತ್ತು ರಬ್ಬಿಗಳ ಮಾತಿನಂತೆ ನಡೆಯುತ್ತಿದ್ದರು  .
೬. ಆರನೇ ಗುಂಪಿನ ಜನರು , ಯಾವುದೇ ದೇವರುಗಳಿಲ್ಲ , ಮಜಾ ಮಾಡಿ ಜೀವಿಸಿ ಎಂಬ ರೀತಿಯಲ್ಲಿರುತ್ತಿದ್ದರು

ಆಗ ಅರಬರಲ್ಲಿ ಕೂಡ ಈ ಆರು ರೀತಿಯ ಜನರು ಒಟ್ಟಾಗಿ ಇದ್ದರು ಇವರ ಮಧ್ಯೆ ಯಾವುದೇ ವೈಶಮ್ಯವಿರದೇ ಅಂಧಕಾರದಲ್ಲಿ ಜೀವಿಸುತ್ತಿದ್ದರು .
ಯಾರೂ ಯಾರ ಮೇಲೆ ದೌರ್ಜನ್ಯ ವೆಸಗಲಿ ಅದಕ್ಕೆ ನ್ಯಾಯ ನೀಡುವ ಮಟ್ಟಿಗೂ ಚಿಂತಿಸುತ್ತಿರಲಿಲ್ಲ
ಅಂತಹ ಸಮಯದಲ್ಲಿ  ಪ್ರವಾದಿ ಮೊಹಮ್ಮದರು ಮೂರನೇ ಗುಂಪಿಗೆ ಸೇರಿದವರಾಗಿದ್ದರು
ಒಂದು ಅತ್ಯುತ್ತಮ ನಲ್ವತ್ತು ವರ್ಷಗಳ ಜೀವನ ನಡೆಸಿ ಜನರಿಂದ ಮನ್ನಣೆ ಪಡೆದು ಸತ್ಯವಂತ ನಂಬಿಗಸ್ಥ ನೆಂಬ ಬಿರುದು ಪಡೆದಿದ್ದರೂ ದೇವ, ಧರ್ಮ, ಉತ್ತಮ ಸಮಾಜದ ರೀತಿ ನೀತಿಗಳ ಬಗ್ಗೆಯೂ ಅರಿವಿರಲಿಲ್ಲ .
ಇಂತಹ ಸಮಾಜದಿಂದ ದೂರ ಹೋಗಿ ತಮ್ಮ ಮನ ಬಂದಂತೆ ಅಲ್ಲಾಹ್ ನ ಧ್ಯಾನದಲ್ಲಿ ನೂರ್ ಪರ್ವತದ ಹಿರಾ ಗುಹೆಯಲ್ಲಿ ತಮ್ಮದೇ ರೀತಿಯಲ್ಲಿ ಧ್ಯಾನದಲ್ಲಿ ಕುಳಿತಿದ್ದರು . ಇದೊಂದು ರೂಢಿ ಯಾಗಿ ಮಾಡಿಕೊಂಡಿದ್ದರು .

ಅಂತಹ ಧ್ಯಾನ ಮಗ್ನ ರಾಗಿದ್ದಾಗ ಅಲ್ಲಾಹನು ಆತನ ದೇವಚರರ ಸರದಾರ ಜಿಬ್ರಿಲರನ್ನು ಕಳುಹಿಸಿ ಮೊದಲ  ಸಂದೇಶವನ್ನು ಅವತೀರ್ಣ ಗೊಳಿಸಿದ್ದನು 

ಅದು ಅಧ್ಯಾಯ 96 ರ ಮೊದಲ ಐದು ಸೂಕ್ತಗಳಾಗಿದ್ದುವು .

ಅದರ ನಂತರ ಸಂಧರ್ಭಕ್ಕನುಗುಣವಾಗಿ ಅಲ್ಲಾಹನು ಜಿಬ್ರಿಲ್ ಅವರ ಮೂಲಕ ಪ್ರವಾದಿಯವರ ಹೃದಯದಲ್ಲಿ ಈ ಸೂಕ್ತಗಳನ್ನು ಅವತೀರ್ಣ ಗೊಳಿಸುವ ಏರ್ಪಾಡು ಮಾಡಿದ್ದನು
ಪ್ರವಾದಿಯವರು  ಬೇಗ ಬೇಗನೆ ಪಠಿಸುವುದನ್ನು ತಡೆದು ಅಲ್ಲಾಹನು ಸಾರಿದನು  ಇದು ನಿಮ್ಮ ಹೃದಯದಲ್ಲಿ  ಸಂರಕ್ಷಿಸಲಾಗುತ್ತದೆ ಬೇಗ ಬೇಗನೆ ಪಠಿಸುವ ಅಗತ್ಯವಿಲ್ಲ .
ಇದು ಅವತೀರ್ಣ ಗೊಂಡಂತೆ ಅದನ್ನು ಸಹಬಾ ವರ್ಯರಿಗೂ ಬಾಯಿಪಾಠ ಮಾಡಿಸಲಾಗುತ್ತಿತ್ತು
ಕೆಲವು ಸಹಬಿವರ್ಯರು ಬಾಯಿಪಾಠ ಮಾಡುವುದರೊಂದಿಗೆ  ಬರೆದಿಡುತ್ತಿದ್ದರು . ಅದನ್ನು ಪ್ರವಾದಿಯವರು ಉತ್ತೇಜಿಸುತ್ತಿದ್ದರು , ಅವರಿಗೆ ಮಾರ್ಗದರ್ಶನ ನೀಡುತ್ತಿದ್ದರು
ಅದು ಓದು ಬರಹ ತಿಳಿದಿದ್ದ ಸಹಾಬಿಗಳಾಗಿದ್ದರು .
ಈ ಕುರಾನಿನ ಮೊದಲ ಸೂಕ್ತಗಳು ರಂಜಾನ್ ತಿಂಗಳ ಕೊನೆಯಲ್ಲಿ ಅವತೀರ್ಣ ಗೊಂಡಿತ್ತು
ಅದರ ನಂತರ ಪ್ರತಿ ರಂಜಾನಿನಲ್ಲಿ ಜಿಬ್ರಿಲ್  ಬಂದು ಪ್ರವಾದಿಯವರಿಂದ ಕುರಾನಿನ ಅವತೀರ್ಣ ಗೊಂಡಿದ್ದ ಭಾಗವನ್ನು ಕೇಳುತ್ತಿದ್ದರು
ಕುರಾನಿನ 90  ಅಧ್ಯಾಯ ಮಕ್ಕಾದಲ್ಲೂ  24  ಅಧ್ಯಾಯ ಮದಿನದಲ್ಲೂ ಅವತೀರ್ಣ ಗೊಂಡಿವೆ .
ಕುರಾನಿನ ಸೂಕ್ತಗಳನ್ನು ಅವತೀರ್ಣ ಗೊಂಡಾಗ ಅದನ್ನು ಕುರಾನಿನ ಯಾವ ಭಾಗದಲ್ಲಿ ಇರಿಸಬೇಕೆಂಬ ಆದೇಶವನ್ನು ಜಿಬ್ರಿಲ್ ನೀಡುತ್ತಿದ್ದರು .
ಈ ರೀತಿ ಪ್ರವಾದಿ ಮೊಹಮ್ಮದರು ಸಹಬಾವರ್ಯರಿಗೆ ಬಾಯಿಪಾಠ ಮಾಡಿಸುತ್ತಿದ್ದರು .
ಪ್ರವಾದಿ ಜೀವನದ ಕೊನೆಯ ರಾಮಜಾನಿನಲ್ಲಿ ಜಿಬ್ರಿಲ್ ಬಂದು ಪ್ರವಾದಿಯವರಿಂದ  ಎರಡು ಸಲ  ಕುರಾನ್  ಕೇಳಿ ಹೋಗಿದ್ದರು .
ಅದರ ನಂತರ ಕುರ್ಆನ್  ಅದೇ ರೀತಿಯಲ್ಲಿ ಬಾಯಿ ಪಾಠ ಮಾಡುವ ಕಾರ್ಯವು ಅಂದಿನಿಂದಲೇ ಮೊದಲ್ಗೊಂಡಿತು.
ಇಂದಿನ ವರೆಗೂ ಅದೇ ಜಾರಿಯಲ್ಲಿದೆ .ಲೋಕದಾದ್ಯಂತ ಮುಸ್ಲಿಮರಿರುವ ಎಲ್ಲಾ  ದೇಶಗಳಲ್ಲಿ ಈ ಕುರಾನ್ ಬಾಯಿ ಪಾಠ ಮಾಡುವ ಮದ್ರಸ ಗಳು ಹರಡಿ ಕೊಂಡಿವೆ .ನಮ್ಮ ಮಂಗಳೂರಲ್ಲೇ ಅದೆಷ್ಟೋ ಕಡೆಗಳಲ್ಲಿ ಬಾಯಿ ಪಾಠ ಮಾಡುವ ಮದ್ರಸಾಗಲಿವೆ . ಇದು ಲೋಕಾಂತ್ಯದ   ವರೆಗೂ ಮುಗಿಯದ ಒಂದು ಕಾರ್ಯಕ್ರಮ .

ಯಾವರೀತಿಯಲ್ಲಿ ಅವತೀರ್ಣ ರೀತಿ ಕುರಾನಿನ ನಿರೂಪಿಸಲಾಗಿದೆಯೋ ಅದೇ ರೀತಿ ಅದನ್ನು ಬಾಯಿಪಾಠ ಮಾಡುವ ರೀತಿಯನ್ನೂ ಅಲ್ಲಾಹನು ಜಿಬ್ರಿಲ್ ರವರ ಮೂಲಕ ಕಲಿಸಿ ಕೊಟ್ಟಿದ್ದನು.
ಅದೇ ರೀತಿಯಲ್ಲಿ ಬರಹ ರೂಪದಲ್ಲೂ ಬರೆಯಲಾಗುತ್ತಿತ್ತು
ಹಾಗಾಗಿ ಕುರಾನಿನ ಮೊದಲ ಅದ್ಯಾಯ ಮಕ್ಕ ದಲ್ಲಿ ಒಂದು ಸಂಪೂರ್ಣ ಅದ್ಯಯವಾಗಿ ಮೊತ್ತ ಮೊದಲು ಅವತೀರ್ಣ ಗೊಂಡ ಅದ್ಯಾಯ ವಾಗಿದೆ .

ಎರಡು , ಮೂರು. ನಾಲ್ಕು , ಐದು ಇವು ಮದೀನದಲ್ಲಿ ಪ್ರವಾದಿತ್ವದ ಹದಿನೈದು ವರ್ಷಗಳ ನಂತರ ಅವತೀರ್ಣ ಗೊಂಡ ಅಧ್ಯಾಯಗಳು .

ಆರು , ಏಳು ಮೆಕ್ಕಾದಲ್ಲಿ ಅವತೀರ್ಣ ಗೊಂಡದ್ದು

ಎಂಟು ಮದೀನಾದ ಮೊದಲ ಹಂತದ ಮತ್ತು ಒಂಬತ್ತು ಮದೀನಾದ ಕೊನೆಯ ಹಂತದಲ್ಲಿ ಅವತೀರ್ಣ ಗೊಂಡವುಗಳು

ಈ ರೀತಿ ಆ ಅಧ್ಯಾಯಗಳನ್ನು ಇರಿಸುವುದರಲ್ಲಿ ಅಲ್ಲಾಹ ನ ಮಾರ್ಗದರ್ಶದ ಯುಕ್ತಿ ಸಂಪೂರ್ಣ ತಿಳಿಯಬಹುದು .

ಕುರಾನ್ ಅವತೀರ್ಣ ಗೊಂಡಾಗ ಯಾವ ಸತ್ಯ ವಿಶ್ವಾಸಿಯೂ ಇರಲಿಲ್ಲ .. ಅಂತಹ ಸಮಯದಲ್ಲಿ ಆ ಅವತೀರ್ಣ ರೀತಿ ಅತಿ ಅಗತ್ಯವಾಗಿತ್ತು .

ಇನ್ನು ಲೋಕಾಂತ್ಯದ ವರೆಗೆ ಲೋಕದಲ್ಲಿ ಸತ್ಯ ವಿಶ್ವಾಸಿಗಳು ಇರುವುದರಿಂದ ಈ ಕುರಾನಿನ ರೂಪದಲ್ಲಿ ಜನರಿಗೆ ಮಾರ್ಗದರ್ಶನ ನೀಡುವಲ್ಲಿ ಅದು ಯಶಸ್ವಿಯಾಗಿರುತ್ತದೆ .

ಇದಾಯ್ತು ಸಂಕ್ಷಿಪ್ತವಾಗಿ ಕುರಾನಿನ ಅವತೀರ್ಣದ ಬಗ್ಗೆ ಕೆಲವು ಮೂಲ ವಿಷಯಗಳು ಸಂಕ್ಷಿಪ್ತವಾಗಿ .

ಇಡೀ ಲೋಕದಲ್ಲಿರುವ ಕುರಾನ್ ಗ್ರಂಥಗಳನ್ನು ಮತ್ತು ಎಲ್ಲ ಧರ್ಮಗಳ ಗ್ರಂಥಗಳನ್ನು  ನಾಶ ಮಾಡಿ ಬಿಟ್ಟರೂ ಅಂದೇ ಮತ್ತೊಮ್ಮೆ ಲೋಕದ ಎಲ್ಲ ಮೂಲೆಗಳಿಂದ  ಮೂಲ ರೂಪದಲ್ಲೇ  ಕುರಾನ್ ಪ್ರತಿಗಳನ್ನು ಮತ್ತೊಮ್ಮೆ ರಚಿಸಲಾಗುವ ಏಕೈಕ ಗ್ರಂಥವಾಗಿ ಕಾಣಬಹುದು .
ಅದಾಗಿದೆ ಕುರಾನನ್ನು ಲೋಕಾಂತ್ಯದ ವರೆಗೂ ಅಲ್ಲಾಹನ ಕಡೆಯಿಂದ ಸಂರಕ್ಷಿಲಾಗಿರುವ ರೀತಿ .
ಇದಾಗಿದೆ ಅವತೀರ್ಣದ ಬಗ್ಗೆ ಇನ್ನು ಮಾರ್ಗದರ್ಶನದ ಬಗ್ಗೆ ಪಾರ್ಟ್ ೨
ಅದರ ನಂತರ ಹದೀಸ್ ಗಳ ಬಗ್ಗೆ ವಿವರಿಸಿ ಅದು ತಿಳಿದ ಮೇಲೆ ಹದೀಸ್ ಗಳ ಮಹತ್ವ ಅರಿಯಬಹುದಷ್ಟೆ .
ಅಷ್ಟರವರೆಗೆ ಒಣ ಗಂಟಲಲ್ಲಿ ಕಡುಬು ತುರುಕಿಸಿದಂತಾಗುವುದು ಸ್ವಾಭಾವಿಕ .

MMGS

ಸೋಮವಾರ, ಮೇ 28, 2018

ಸಿದ್ದರಾಮಯ್ಯರನ್ನು ಗೆಲ್ಲಿಸಲು ತೋರಿಸಿದ ತಖ್ವಾ ಸಮುದಾಯವನ್ನು ಗೆಲ್ಲಿಸಲಿಕ್ಕೂ ತೋರಿಸುವ*

*ಸಿದ್ದರಾಮಯ್ಯರನ್ನು ಗೆಲ್ಲಿಸಲು ತೋರಿಸಿದ ತಖ್ವಾ  ಸಮುದಾಯವನ್ನು ಗೆಲ್ಲಿಸಲಿಕ್ಕೂ ತೋರಿಸುವ*

*ಸುನ್ನೀಟುಡೇ*

ಇಸ್ಲಾಮಿನಲ್ಲಿ ಬೆದರಿಕೆ, ನಿಂದನೆ, ಹಿಯಾಲಿಸುವಿಕೆ, ಮಾನಛಿದ್ರತೆ, ಅಸಹನೆ, ಕೋಪ, ಮತ್ಸರ ಇಲ್ಲಾ ಎಂದು ಮದ್ರಸದಲ್ಲಿ ಉಸ್ತಾದರು ಹೇಳಿದ್ದ ನೆನಪು. ಇದನ್ನು ಕಳೆದ ಕೆಲವು ದಿನದ ಹಿಂದೆ ಒಬ್ಬರು ವಿದ್ವಾಂಸರಲ್ಲಿ ಹೇಳುತ್ತಾ ಈ ಎಲ್ಲಾ ಸ್ವಭಾವಕ್ಕಿಂತ ಮಿಗಿಲಾಗಿ ಮುಸ್ಲಿಮನಲ್ಲಿ ಏನು ಇರಬೇಕು ಎಂದು ಕೇಳಿದೆ. ವಿದ್ವಾಂಸರು ತುಂಬಾ ಹೊತ್ತು ಆಲೋಚಿಸಿದರು ಅನಂತರ ಹೀಗೆ ಹೇಳಿದರು  *'ಇಸ್ಲಾಮಿನಲ್ಲಿ ಉಪದೇಶ, ಸುವಾರ್ತೆ ಮತ್ತು ಎಚ್ಚರಿಕೆ  ಇದೆ'.* ಪ್ರವಾದಿ ಮುಹಮ್ಮದ್ ( ಸ) ರು ಎಲ್ಲಾ ಕಠಿಣ ಸನ್ನೀವೇಶದಲ್ಲೂ ಉಪದೇಶಕರಾಗಿದ್ದರು. ಜನರನ್ನು ಸನ್ಮಾರ್ಗಕ್ಕೆ ಮತ್ತು ಸತ್ಕರ್ಮಕ್ಕೆ ಕರೆಯುತ್ತಾ ಅವರು ಸುವಾರ್ತೆಯನ್ನು ಬಿತ್ತರಿಸುತ್ತಿದ್ದರು. ಮನುಷ್ಯನ ಜೀವನದ ಮಹತ್ವ ಮತ್ತು ಬದುಕಿನ ಗುರಿಯ ಕುರಿತು ವಿವರಿಸುತ್ತಾ ಅಲ್ಲಾಹನ ಕುರಿತು ಹಾಗೇ ಪರಲೋಕದ ಕುರಿತು ಎಚ್ಚರಿಸುತ್ತಿದ್ದರು. *ಪ್ರವಾದಿ (ಸ)ರನ್ನು ಅದೇ ರೀತಿಯಲ್ಲಿ ಸಾಕ್ಷಿಯಾಗಿಸಿ ಕ್ಷಮೆ - ಸಹನೆ - ಪ್ರೇಮ - ಪರೋಪಕಾರದ ಆಯುಧವನ್ನು ಉಪಯೋಗಿಸಿ ಭೂಮಿ ಮತ್ತು ಪರಲೋಕದಲ್ಲಿ ನಮಗೆ ಗೆಲ್ಲಬಹುದಾಗಿದೆ.* ಇಲ್ಲವಾದರೆ ಆಪತ್ತುಗಳು ನಮ್ಮನ್ನು ಎರಡು ಲೋಕದಲ್ಲೂ ಭೀಕರ ಅವಮಾನಕ್ಕೆ ತಲ್ಲಬಹುದು.

ಗುರುಗಳ ಮಾತು ನನಗೆ ಹಿತ ಎನಿಸಿತು. ಈ ಮಾತನ್ನು ನಾನು ಒಬ್ಬರು ಮುಸ್ಲಿಮ್ ಪತ್ರಕರ್ತರಲ್ಲಿ ಹೇಳಿದೆ. ಅದನ್ನು ಕೇಳುತ್ತಾ ಪತ್ರಕರ್ತ ನನ್ನಲ್ಲಿ ಹೇಳಿದ  ಗುರುಗಳು ಸರಿಯಾದ ವಿಚಾರವನ್ನೇ ಹೇಳಿದ್ದಾರೆ. *ಎಲ್ಲಿಯಾದರು ಈಗಿನ ಮುಸ್ಲಿಮರು ರಸೂಲರ ಕಾಲದಲ್ಲಿ ಮದೀನದಲ್ಲಿ ಇರುತ್ತಿದ್ದರೆ ನಮಗೆ ಮಕ್ಕಾದ ವಿಜಯ ಸಾಧ್ಯವಾಗುತ್ತಿರಲಿಲ್ಲ. ಮಕ್ಕಾದಲ್ಲಿ ಮುಸ್ಲಿಮರು ಇರುತ್ತಿರಲಿಲ್ಲ.*

ಪತ್ರಕರ್ತನ ಮಾತು ಸತ್ಯವಾಗಿತ್ತು. ಸಹನೆ - ಕ್ಷಮೆ - ಅನುಸರಣೆ - ತ್ಯಾಗ ನಮ್ಮಲ್ಲಿ ನಾಶವಾಗಿದೆ. ಸಿದ್ದರಾಮಯ್ಯರ ಮೇಲಿನ ಪ್ರೀತಿಗಾಗಿ ಒಟ್ಟು ಸಮುದಾಯವನ್ನು ಹೈಜಾಕ್ ಮಾಡಿಟ್ಟ ಸಮೂಹ, ಅಲ್ಲಾಹನ ಪ್ರೀತಿಗಾಗಿ ಇದನ್ನು ಮಾಡುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದೂ ಭಾವಿಸಿದ್ದಿದೆ. ಕಾಂಗ್ರೇಸ್ಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಲೇಖನಿ - ಸಮಯ - ಜ್ಞಾನ - ಹಣ -ಸಂಘಟಿತ ಪ್ರಯತ್ನ- ಚರ್ಚೆ - ತರ್ಕ - ಹಠ ಎಲ್ಲವನ್ನೂ ದಾರೆ ಎರೆದ ಮುಸ್ಲಿಮ್ ಸಮೂಹದ ಇಚ್ಚಾಶಕ್ತಿ, ನಂಡೆ ಪೆಂಙಲ್ ನಂತಹ ಅಭಿಯಾನಕ್ಕೆ ಮುಡಿಪಾಗಿಟ್ಟಿದ್ದರೆ ಇಂದು 30 ಯಾಕೆ 24 ದಾಟಿದ ಯುವತಿಯರು ಈ ಸಮುದಾಯದಲ್ಲಿ ಇರುತ್ತಿರಲಿಲ್ಲ.  *ರಾಜಕೀಯ ತಪ್ಪಲ್ಲ, ಆದರೆ ಅದು ನಮ್ಮ ಸಬಲೀಕರಣದ ಉದ್ದೇಶವನ್ನು ಮರೆತು ಇನ್ನೊಂದು ಪಕ್ಷದ ಮೇಲಿನ ಹಗೆ - ದ್ವೇಷ - ಮತ್ಸರಕ್ಕೆ ಉಪಶಮನ ಆಗಬಾರದು.*  ಒಬ್ಬ ಬಜರಂಗಿ ಹಿಂದುಗಳನ್ನು ಬಿಜೆಪಿಗೆ ಬಲಾತ್ಕರಿಸುವುದು ಹೇಗೆ ತಪ್ಪೋ ಹಾಗೇ ಒಬ್ಬ ಮುಸ್ಲಿಮ್ ಮುಸ್ಲಿಮರನ್ನು ಕಾಂಗ್ರೇಸ್ಸ್ ಗೆ ಬಲಾತ್ಕರಿಸುವುದು ನನ್ನ ಪ್ರಕಾರ  ತಪ್ಪಾಗಿದೆ.

ರಾಜಕೀಯ ಯಾಗದಲ್ಲಿ ತನು - ಮನ ಕೇಂದ್ರೀಕರಿಸಿ ಭ್ರಮೆಯ ಲೋಕದಲ್ಲಿ ಮಂಕು ಬಡಿದಿದ್ದ ಸಮುದಾಯದ ಕೆಲವು ವರ್ಗವನ್ನು ಬಡಿದೆಬ್ಬಿಸಲು ಸುನ್ನೀಟುಡೇ ಹಲವು ಸಂಚಿಕೆ ಲೇಖನ ಪ್ರಕಟಿಸಿತು. ಎಲ್ಲರೂ ಇದೆಲ್ಲ ಈಗ ಯಾಕೆ ಎಂದು ಕೇಳಿದ್ದರು. ಈಗ ನಮಗೆ ಸಿದ್ದರಾಮಯ್ಯ ಬರಬೇಕು. ಅದು ನಮ್ಮ ಏಕೈಕ ಪ್ರಾರ್ಥನೆ. 'ನೋಂಬು ನೆಕ್ಸ್ಟ್ ವರ್ಷ ಬಂಡ್ ಸಿದ್ದರಾಮಯ್ಯ ಬಂಡಿಲ್ಲ ಎಂದು ಹೇಳಿದ ವ್ಯಕ್ತಿಯೂ ನಮ್ಮ ಮಧ್ಯೆ ಇದ್ದಾರೆ'. *ಸಿದ್ದರಾಮಯ್ಯರನ್ನು ಗೆಲ್ಲಿಸಬೇಕು ಎಂದು ಅವಿರತ ಶ್ರಮಿಸಿದ ನಮಗೆ ಸಮುದಾಯವನ್ನು ಎಲ್ಲಾ ಕ್ಷೇತ್ರದಲ್ಲೂ ಗೆಲ್ಲಿಸಲು ಇದೇ ರೀತಿಯ ಛಲ ಮತ್ತು ಇಚ್ಚಾಶಕ್ತಿ ಇರುತ್ತಿದ್ದರೆ ಫಲಿತಾಂಶ  ಅಭಿಮಾನ ತರಿಸುತ್ತಿತ್ತು.*  ಅಲ್ಲಾಹನ ಕಲ್ಪನೆಯ ಮುಂದೆ ಎಲ್ಲವೂ ತಲೆ ಕೆಳಗಾಯಿತು. ಅಡಿಗೆ ಬಿದ್ದರೂ ಮೂಗು ಮೇಲೆ ಎನ್ನುವಂತೆ ಈಗ ಡಿಕೆ ಶಿವಕುಮಾರ್ ನಮ್ಮ ಸಮುದಾಯಕ್ಕೆ ನೇದಾವು ಆಗಿದ್ದಾರೆ. ನಮ್ಮೊಳಗಿನ ಹೃದಯ ಎಷ್ಟು ಮತಾಂಧವಾಗಿದೆ ಎನ್ನುವುದಕ್ಕೆ ಇದಕ್ಕಿಂದ ದೊಡ್ಡ ಉದಾಹರಣೆ ಬೇಕಿಲ್ಲ. ಸಂಘಪರಿವಾರವು ಹಿಂದೂಗಳಿಗೆ ಚುಚ್ಚಿದ ಕೋಮುವಾದದ ಇಂಜೆಕ್ಷನ್ ಮುಸ್ಲಿಮರ ಮೇಲೆ ಪ್ರಭಾವ ಬೀರಿದೆ. ಉಪದೇಶ ಮತ್ತು ಸುವಾರ್ತೆ ನೀಡಬೇಕಾದ ಕೌಮ್ ನ ಉಮ್ಮತ್ತುಗಳು ನಿಂಧನೆ - ಮಾನಹಾನಿ - ಹಗೆ -ತಮಾಷೆ- ಹಿಯಾಲಿಸುವಿಕೆಯಲ್ಲಿ ಮೈಮರೆತಿದೆ.

ಚುನಾವಣೆಯ ಮೊದಲು ಶಾಫಿ ಸಹದಿ - ಎಸ್.ಬೀ. ದಾರಿಮಿ- ಅಜೀಜ್ ದಾರಿಮಿ ಮುಂತಾದ ಉಲೆಮಾಗಳು ಸಿದ್ದರಾಮಯ್ಯರ ಬಳಿ ಹಾಗೇ ಕುಮಾರಸ್ವಾಮಿಯವರ ಬಳಿಗೆ ಹೋಗಿ ಮಾತುಕತೆ ನಡೆಸಿದ್ದರು. ಇದನ್ನು ಪ್ರಶ್ನಿಸಿ ಸುನ್ನೀ ಟುಡೇ ಮೂವರು ಉಲೆಮಾಗಳಲ್ಲೂ ಮಾತುಕತೆ ನಡೆಸಿತ್ತು. *ನೀವೇಕೆ ಯಡಿಯೂರಪ್ಪರ ಬಳಿ ಹೋಗಲಿಲ್ಲ ? ನಾಳೆ ಅವರು ಮುಖ್ಯಮಂತ್ರಿ ಆದರೆ ಏನು ಮಾಡುತ್ತೀರಿ ? ಚುನಾವಣೆಗೆ ಈ ಗಿಮಿಕ್ಕ್ ಯಾತಕ್ಕೆ ? ಸರಕಾರ ಇರುವಾಗ ಈ ಮೀಟಿಂಗ್ ಮಾಡದೆ ನಾಳೆ ಯಾರು ಅಧಿಕಾರಕ್ಕೆ ಬರುತ್ತಾರೆ ಎಂದು ಗೊತ್ತಿಲ್ಲದೆ ಈ ಮೀಟಿಂಗ್ ನ ಅಗತ್ಯ ಇದೆಯಾ ? ಎಂದು ಕೇಳಿದ್ದೆ.* ಸಮುದಾಯದ ಹಿತಕ್ಕಾಗಿ ಇಚ್ಚಾಶಕ್ತಿಯಿಂದ ಪ್ರಯತ್ನಿಸುವ ಈ ಮೂವರೂ ನಮಗೆ  ಅತ್ಯುತ್ತಮ ಮಾಹಿತಿ ನೀಡಿದ್ದರು.

ಈ ಸಂದರ್ಭ ಶಾಫಿ ಸಹದಿಯವರು ನನ್ನಲ್ಲಿ ಸುದೀರ್ಘವಾದ ಮಾತುಕತೆ ನಡಿಸಿದರು. ಸರಕಾರ ಯಾರದ್ದು ಬೇಕಿದ್ದರೂ ಬರಲಿ, ಮುಸ್ಲಿಮರ ಸಮಗ್ರ ಕಲ್ಯಾಣ- ಅಭಿವೃದ್ದಿ - ಭದ್ರತೆ ಮತ್ತು ನ್ಯಾಯದ ರಕ್ಷಣೆಯನ್ನು ವೀಕ್ಷಿಸುವ ಸಮಿತಿಯನ್ನು ಅಸ್ತಿತ್ವಕ್ಕೆ ತರುತ್ತೇವೆ ಎಂದು ಅವರು ಹೇಳಿದರು. ಮಾತಿನ ಕೊನೆಯಲ್ಲಿ ಯಾವ ಸರಕಾರ ಬರುವ ನಿರೀಕ್ಷೆ ಇದೆ ಎಂದು ಕೇಳಿದ್ದೆ. *ಅದಕ್ಕೆ ಉತ್ತರಿಸಿದ ಶಾಫಿ ಸಹದಿಯವರು  ಸಮ್ಮಿಶ್ರ ಸರಕಾರ ಬರುವ ಸಾಧ್ಯತೆ ಇದೆ. ಹಾಗೇನಾದರು ಆದರೆ ಕುಮಾರಸ್ವಾಮಿ ಮುಖ್ಯಮಂತ್ರಿ, ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ ಎಂದರು.*  ಅದು ಅವರು, ಅರಿತ ಹಾಗೇ ಬೆರೆತ ರಾಜಕೀಯ ವಲಯದ ಅಭಿಪ್ರಾಯವಾಗಿತ್ತು. ಸಾಧ್ಯತೆಗಳು ನಿಜವಾಗುವ ಸಂಭವಗಳ ಬಗ್ಗೆ ಆಳವಾಗಿ ಅವರು ನಮಗೆ ವಿವರಿಸಿದರು. ಅವರ ಅಭಿಪ್ರಾಯವನ್ನು ನಾನು ಯಥಾವತ್ ನ್ಯೂಸ್ ಕನ್ನಡದಲ್ಲಿ ಪ್ರಕಟಿಸಿದ್ದೆ.

ಒಬ್ಬ ವ್ಯಕ್ತಿ ಹೇಳಿದ ಕಾರಣಕ್ಕೋ ಅಥವಾ ಒಬ್ಬ ವ್ಯಕ್ತಿ ಬರೆದ ಕಾರಣಕ್ಕೋ ಇಲ್ಲಿ ಯಾರು ಸಿ.ಎಂ ಅಥವಾ ಡಿಸಿಎಂ ಆಗುವುದಿಲ್ಲ. ಕಾಕತಾಳೀಯವಾಗಿ ಬರೆದದ್ದು ನಿಜವಾದರೆ ಅದು ವಿಶೇಷ ಮಾನ್ಯತೆ ಪಡೆಯುವ ಸಂಭವವೂ ಅಲ್ಲ. ಉಲೆಮಾಗಳು ರಾಜಕೀಯ ಪಾಂಡಿತ್ಯ ಹೊಂದುವುದು ಮಹಾ ಅಪರಾಧವೂ ಅಲ್ಲ. *ವಿಚಾರಗಳು ಮತ್ತು ಅಭಿಪ್ರಾಯಗಳು ಇದೇ ಆಗಿರಬೇಕು ಎಂದು ಒತ್ತಡ ಹಾಕುವುದು ಮತ್ತು ಭಾರತದಲ್ಲಿ ಇಂತಹುದೇ ಆಹಾರ ಸೇವಿಸಬೇಕು ಎಂದು ಬೆದರಿಕೆ ಹಾಕುವುದು ಎರಡೂ ಒಂದೇ ರೀತಿಯ ಸ್ವಭಾವ ಆಗಿದೆ.*

ಉಪದೇಶ - ಸುವಾರ್ತೆ - ಎಚ್ಚರಿಕೆ ಕೊಡಬೇಕಾದ ಕೌಮಿನ ಉಮ್ಮತ್ತುಗಳು ಸಿದ್ದರಾಮಯ್ಯರ ಮೇಲಿದ್ದ ಅಭಿಮಾನದಿಂದ ಅಂಧವಾಗಿ ನಮ್ಮ ಮೇಲೆ ಮುಗಿ ಬಿದ್ದಿತು. ಶಾಫಿ ಸಹದಿಯವರನ್ನು ಮಾನಸಿಕವಾಗಿ ಹಾಗೇ ನೈತಿಕವಾಗಿ ಕುಗ್ಗಿಸಿ ಹೇಳಿಕೆಯನ್ನೂ ಬರೆಯಿಸಿತು. ಕೇಸರೀ ಶಾಲು ಹಾಕಿದ್ದಕ್ಕೆ ಹಾಗೇ ಕಾಂಗ್ರೇಸ್ಸ್ ಗೆ ಹಿಂದುಗಳನ್ನು ಕರೆಯುವುದನ್ನು ವಿರೋಧಿಸಿ ಮತಾಂದ ಯುವಕನೊಬ್ಬ ಹರಡಿದ ಆಡಿಯೋವನ್ನು ಮಹಾ ಅಕ್ರಮ ಎಂದು ಪ್ರಚಾರ ಮಾಡಿದ್ದ ಸಮುದಾಯ, ಕಾಂಗ್ರೆಸ್ಸ್ ನ ವಿರುದ್ದ ಮಾತನಾಡುವ ಮುಸ್ಲಿಮರನ್ನು ಭಯಪಡಿಸಿದ್ದು ಮತ್ತು ಅವಮಾನಿಸಿದ ಜಾತ್ಯಾತೀತವನ್ನು ಒಪ್ಪುವಂತದ್ದಲ್ಲ.

ಮಹಾತ್ಮರಾದ ಮಾಲಿಕುದಿನಾರ್ ಕಾಲದಲ್ಲಿ ನಮ್ಮಂತಹ ಮುಸ್ಲಿಮರು ಇರುತ್ತಿದ್ದರೆ ನಮ್ಮ ಸ್ಥಿತಿ ಏನಾಗುತ್ತಿತ್ತು ? ನಾವು ಸೋಶಿಯಲ್ ಮೀಡಿಯಾ ಹಾಗೇ ವಾಟ್ಸಾಪ್ ಗಳಲ್ಲಿ ಹರಡುತ್ತಿರುವುದು ಏನನ್ನು ? ಮೋದಿಯನ್ನು ಹಾಗೇ ಬಿಜೆಪಿಗರನ್ನು ಎದುರಿಸುವುದು ಮತ್ತು ಹಿಯಾಲಿಸುವುದಕ್ಕೆ ನಾವು ಹುಟ್ಟಿದವರಾ ? ಹೀಗೇ ಹಿಯಾಲಿಸಿ - ನಿಂಧಿಸಿ - ಬೆದರಿಸಿ ಕರಾವಳಿಯಲ್ಲಿ ಮುಸ್ಲಿಮರ ಪರಮ ಪ್ರೀತಿಯ ನಾಯಕ
ಸಿದ್ದರಾಮಯ್ಯರ ಪಕ್ಷದ ನಾಮಾಶೇಷ ಅಗಿರುವುದು ನಮ್ಮಿಂದಲೇ ಎಂದು ನಾನು ಹೇಳಿದರೆ ನೀವು ನನ್ನ ಮೈಮೇಲೆ ಬೀಳುತ್ತೀರಾ ? ಕಾಂಗ್ರೇಸ್ಸ್ ಪಕ್ಷದ ಐಟೀ ಸೆಲ್ ಆಗಿ ಕಾರ್ಯಾಚರಿಸುವ ನಮಗೆ ಯಾವ ಲಾಭ ಸಿಗುತ್ತಿದೆ ?  ತಮಾಷೆ - ಹಾಸ್ಯ - ಅವಮಾನ ಮಾಡಿ ನಾವು ಒಂದು ಭೃಹತ್ತ್ ಸಮೂಹದ ಹೃದಯದಲ್ಲಿ ಹಗೆ ಬಿತ್ತುತ್ತಿದ್ದೇವೆ. *ಪ್ರೀತಿ -ಪ್ರೇಮ - ಅನುಕಂಪ ಹರಡಬೇಕಾದ ನಾವು ಯಾವ ಲಾಭಕ್ಕಾಗಿ ಹೀಗೇ ಆಗಿದ್ದೇವೆ ?* ಕಾಂಗ್ರೇಸ್ಸ್ ಮತ್ತು ಜೆಡಿಎಸ್ಸ್ ಒಂದಾದರೆ ನಮಗೆ ಭೂಮಿಯಲ್ಲಿ ಗೌರವ ಸಿಗುವುದೇ ? ನಮಗೆ ಸ್ವರ್ಗ ಸ್ಥಿರವಾಯಿತೇ ? ಸಮುದಾಯದ ಒಳಗೆ ಸಾವಿರಾರು ಸಮಸ್ಯೆ ಇದೆ. ಇದರ ನಿವಾರಣೆಗೆ ಸಂಘಟಿತರಾಗ ಬಹುದೇ? ಸಂಘಟಿತರಾಗಲು ಬೆದರಿಸ ಬಹುದೇ ? ಪ್ರಾರ್ಥಿಸಬಹುದೇ ? ಲೇಖನ ಬರೆಯ ಬಹುದೇ ? ವಾಟ್ಸಾಪ್ ಗೂಪುಗಳನ್ನು ಮಾಡಿ ಚರ್ಚಿಸಿ ಪ್ರಾಯೋಗಿಕ ಪ್ರಯತ್ನಕ್ಕೆ ಮುನ್ನಡೆ ಇಡಬಹುದೇ ? ಹಾಗದರೆ ಕೇಳಿ ಮೂರು ಪ್ರಮುಖ ಸಮಸ್ಯೆಗಳನ್ನು ಹೇಳುತ್ತೇನೆ.
1) ಕರಾವಳಿಯ ಮುಸ್ಲಿಮರಲ್ಲಿ 20 ಮದುವೆಗಳಲ್ಲಿ ಸುಮಾರು 14 ಮದುವೆ ಸಂಬಂಧಗಳು ಬಿರುಕು ಬೀಳುತ್ತಿದೆ. ಡೈವೊರ್ಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿಧ್ಯಾ ಸಂಪನ್ನ ಯುವತಿಯರೇ ಮೇಲುಗೈ, ಕುಟುಂಬ ವ್ಯವಸ್ಥೆ ನಾಶವಾದರೆ ಇಸ್ಲಾಮ್ ಅಸ್ತಿತ್ವ ಆತಂಕಿತ.
2) ಮುಸ್ಲಿಮ್ ಯುವಕರು ಹತ್ತನೇ ತರಗತಿಯಲ್ಲಿ ಡ್ರಾಪ್ ಔಟ್ ಆಗುತ್ತಿದ್ದಾರೆ. ಯುವತಿಯರ ಶಿಕ್ಷಣ ಮಟ್ಟ ಹೆಚ್ಚುತ್ತಿದೆ. ಮದುವೆ ಸಂಬಂಧಗಳು ಮತ್ತು ಇಂಕಂ ಸೋರ್ಸ್ ಬಗ್ಗೆ ಅಸಮಾನತೆ ಇದೆ. ಯುವತಿ ದುಡಿಯಲು ಹೆಚ್ಚು ಆಸಕ್ತಳಾಗಿದ್ದಾಳೆ. ಅದಕ್ಕೆ ಕಾರಣ  ಬೌತಿಕ ಆಯ್ಕೆಗಳು ಎಂಬುವುದು ವಿಷಾಧನೀಯ.
3) ಮುಸ್ಲಿಮ್ ಶಾಲಾ ಕಾಲೇಜು ವಿಧ್ಯಾರ್ಥಿಗಳಲ್ಲಿ ಅಮಲು ಪದಾರ್ಥದ ಚಟ ಹೆಚ್ಚುತ್ತಿದೆ. ಹೆತ್ತವರ ಹಿಡಿತ ತಪ್ಪಿ ಹೋಗಿರುವ 70% ಯುವಕರ ಭವಿಷ್ಯವನ್ನು ಒಮ್ಮೆ ಕಲ್ಪಿಸಿ ನೋಡಿ.

ಎಡಬದಿಯಲ್ಲಿ ಸೀನಿದರೆ ಹರಾಮ್ ಎಂದು ಅದಕ್ಕೆ ಹದೀಸ್ ಹುಡುಕುವ ಜನರಿಗೆ , ಬಿಜೆಪಿ ಬಂದರೆ ಅಪಾಯ ಎಂದು ಅದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಕ್ಷರ ಸಮರ ನಡೆಸುವವರಿಗೆ, ಎಂ.ಆರ್.ಎಂ ಗಳನ್ನೂ , ಧರ್ಮ ಭ್ರಷ್ಟರನ್ನೂ, ಸಮುದಾಯ ಸ್ನೇಹಿಗಳನ್ನು ಹುಡುಕುವ ದುರ್ಭಿನಿಗಳಿಗೆ ಈ ಮೇಲೆ ಹೇಳಿದ ಮೂರು ದುರಂತದಿಂದ ಸಮುದಾಯವನ್ನು ಸರಿದಾರಿಗೆ ತರಲು ಸಾಧ್ಯವಿದ್ದರೆ ಹೇಳಿ....
🏹
*ಸುನ್ನೀಟುಡೇ*